ಭಾರತದಲ್ಲಿ ಸಾರ್ವಜನಿಕ ಹಣ ಕನಿಷ್ಟ ರೂ 1500 ಲಕ್ಷ ಕೋಟಿಗಳಷ್ಟಿದೆ ಅಥವಾ ಪ್ರತಿ ಪುರುಷ, ಮಹಿಳೆ ಮತ್ತು ಮಕ್ಕಳಿಗೆ ತಲಾ 10 ಲಕ್ಷದಷ್ಟಿದೆ. ಪ್ರಸ್ತುತ ಈ ಹಣ ನಿರುಪಯುಕ್ತವಾಗಿ ಸರ್ಕಾರದಲ್ಲಿ ಕೊಳೆಯುತ್ತಿದೆ. ಈ ಹಣವನ್ನು ಹಿಂದಿರುಗಿಸುವುದರಿಂದ ಪ್ರತಿಯೊಬ್ಬ ಭಾರತೀಯನ ಕನಸು ಹಾಗು ಆಶೋತ್ತರಗಳು ಈಡೇರುತ್ತವೆ. ಅಲ್ಲದೆ ಉದ್ಯೋಗಾವಕಾಶಗಳು ಹಾಗು ಅವಕಾಶಗಳೂ ದೊರೆಯುತ್ತವೆ.
ಧನ ವಾಪಾಸಾತಿ ಭಾರತದ ಪ್ರಜೆಗಳ ನೇತೃತ್ವದಲ್ಲಿ ನಡೆಯುವ ಚಳುವಳಿಯಾಗಿದ್ದು, ಪ್ರತಿ ಭಾರತೀಯ ಕುಟುಂಬಕ್ಕೆ, ಪ್ರತಿ ವರ್ಷ ಸರ್ಕಾರ ರೂ ಒಂದು ಲಕ್ಷವನ್ನು ಹಿಂದಿರುಗಿಸಬೇಕು ಎಂಬ ಬೇಡಿಕೆಯನ್ನು ಇಡುತ್ತದೆ.
ಸ್ವಾತಂತ್ರ್ಯಾನಂತರ ಆಡಳಿತ ನಡೆಸಿದ ಸರ್ಕಾರಗಳು ದೇಶವನ್ನು ಸಮೃದ್ಧಗೊಳಿಸಲು ವಿಫಲವಾಗಿವೆ. ಭಾರತದ ಸವಾಲು ಸಂಪತ್ತಿನ ಕೊರತೆಯಲ್ಲ, ಬದಲಿಗೆ ಜನರಿಗೆ ಅಧಿಕಾರಯುತವಾಗಿ ದೊರೆಯಬೇಕಾದ ತಮ್ಮ ಪಾಲು ಸಿಗದಿರುವುದು. ಜನರು ಅಧಿಕಾರಯುತವಾಗಿ ಪಡೆದುಕೊಳ್ಳಬೇಕಾಗಿರುವ ಅವರ ಸಂಪತ್ತನ್ನು ಅವರಿಗೇ ಹಿಂದಿರುಗಿಸಿದರೆ ಬಡತನವನ್ನು ನಿರ್ಮೂಲನೆಗೊಳಿಸಬಹುದು.
ಸ್ವಾತಂತ್ರ್ಯಾನಂತರವೂ ನಮ್ಮ ಸಾರ್ವಜನಿಕ ಸಂಪತ್ತು ನಿರಂತರವಾಗಿ ದುರುಪಯೋಗಕ್ಕೆ ಒಳಗಾಗುತ್ತಿದೆ. ಇದು ಸಾರ್ವಜನಿಕ ಸಂಪತ್ತಿನಲ್ಲಿ ನಮ್ಮ ಪಾಲನ್ನು ಕೇಳಲು ಸುಸಂದರ್ಭ. ನಾವು ಸಮೃದ್ಧ ಮತ್ತು ಸಂಪತ್ಭರಿತ ದೇಶದಲ್ಲಿ ವಾಸಿಸಲು ನಿಶ್ಚಯಿಸಿದರೆ ಮತ್ತು ನಮ್ಮ ಮಕ್ಕಳಿಗೆ ಭದ್ರ ಭವಿಷ್ಯವನ್ನು ಹೊಂದಿದ್ದರೆ, ಶಾಶ್ವತ ಶಾಪ ಎಂಬಂತೆ ಬೆನ್ನಿಗಂಟಿರುವ ಬಡತನ, ನಿರುದ್ಯೋಗ, ವಿದ್ಯಾಭ್ಯಾಸದ ಕೊರತೆ, ಆರೋಗ್ಯದ ಸಮಸ್ಯೆ ಮತ್ತು ಭ್ರಷ್ಟಾಚಾರಗಳು ಖಂಡಿತವಾಗಿಯೂ ನಮ್ಮ ಮುಂದಿನ ಜನಾಂಗಕ್ಕೆ ಮುಂದುವರೆಯುವುದಿಲ್ಲ.
ಧನ ವಾಪಾಸಾತಿ ವಾಸ್ತವಗೊಳಿಸಬಹುದಾದ ಮತ್ತು ಸೂಕ್ತ ಪರಿಹಾರ. ಬನ್ನಿ ಧನವಾಪಾಸಾತಿಯನ್ನು ಬೆಂಬಲಿಸೋಣ ಮತ್ತು ಭಾರತದಲ್ಲಿ ಬಡತನವನ್ನು ನಿರ್ಮೂಲನೆಗೊಳಿಸೋಣ.
ಭೂಮಿ, ಖನಿಜ ಸಂಪತ್ತು ಮತ್ತು ಇತರ ನೈಸರ್ಗಿಕ ಸಂಪತ್ತಿನ ವಿಷಯದಲ್ಲಿ ಭಾರತವು ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದೆ. ನಮ್ಮ ಖನಿಜ ಸಂಪತ್ತು, ಹೆಚ್ಚುವರಿ ಸಾರ್ವಜನಿಕ ಭೂಮಿ ಮತ್ತು ರೋಗಗ್ರಸ್ತ ಸರ್ಕಾರಿ ಸಾಮ್ಯದ ಕಂಪನಿಗಳ ಸಾಂಪ್ರದಾಯಿಕ ಅಂದಾಜು ಕನಿಷ್ಠ ರೂ.1500 ಲಕ್ಷ ಕೋಟಿ. ಈ ಮೊತ್ತವು ಪ್ರತಿ ಭಾರತೀಯ ಕುಟುಂಬಕ್ಕೆ ರೂ.50 ಲಕ್ಷಕ್ಕಿಂತಲೂ ಹೆಚ್ಚು ಅನುವಾದಿಸುತ್ತದೆ. ನಾವು ಈ ಸಂಪತ್ತಿನ ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿಯನ್ನು ವಿಕಿ ಯಲ್ಲಿ ನಿರಂತರವಾಗಿ ಒಗ್ಗೂಡಿಸುತ್ತಿದ್ದೇವೆ. ಪಬ್ಲಿಕ್ ವೆಲ್ತ್ ವಿಕಿ ಅನ್ನು ಉತ್ಕೃಷ್ಟಗೊಳಿಸಲು ನೀವು ಸಹ ಕೊಡುಗೆ ನೀಡಬಹುದು. ಪ್ರತಿಯೊಬ್ಬ ಭಾರತೀಯ ಕುಟುಂಬವೂ ತಮ್ಮ ಸಾರ್ವಜನಿಕವಾದ ಸಂಪತ್ತಿನ ಪಾಲನ್ನು ಹೇಗೆ ಪಡೆದುಕೊಳ್ಳಬಹುದು ಎಂಬ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ಧನ್ ವಾಪಸಿ ಬಿಲ್ ಮತ್ತು ವರದಿ ಓದಿಸಾರ್ವಜನಿಕ ಸಂಪತ್ತು ವಿಕಿ
To know more about how every Indian family can get back their rightful share of public wealth, read our Dhan Vapasi Bill and Report
Have more queries? Visit our FAQ