ಪ್ರತಿ ಭಾರತೀಯ ಶ್ರೀಮಂತ ಮಾಡುವ ಮಾರ್ಗವು ವೈಯಕ್ತಿಕ ಸ್ವಾತಂತ್ರ್ಯವನ್ನು ರಕ್ಷಿಸುತ್ತದೆ, ಖಾಸಗಿ ಆಸ್ತಿಯನ್ನು ರಕ್ಷಿಸುತ್ತದೆ, ಕಾನೂನಿನ ನಿಯಮವನ್ನು ಅನುಸರಿಸುತ್ತದೆ ಮತ್ತು ಮುಕ್ತ ಮಾರುಕಟ್ಟೆಯನ್ನು ಉತ್ತೇಜಿಸುವ ಸೀಮಿತ ಮತ್ತು ಬಲವಾದ ಸರ್ಕಾರದ ಮೂಲಕ


ರಾಜೇಶ್ ಜೈನ್ ಅವರ ಬಗ್ಗೆ:

ರಾಜೇಶ್ ಜೈನ್ ಅವರು ಓರ್ವ ತ೦ತ್ರಜ್ಞಾನಾಧಾರಿತ ವಾಣಿಜ್ಯೋದ್ಯಮಿಯೂ ಹಾಗೂ ಏಷ್ಯಾದ ಡಾಟ್ ಕಾಮ್ ರೆವೊಲ್ಯೂಷನ್ ನ ರೂವಾರಿಯೂ ಆಗಿದ್ದಾರೆ. 1990 ರ ದಶಕದ ಉತ್ತರಾರ್ಧ ವರ್ಷಗಳಲ್ಲಿ ಇವರು ಭಾರತದ ಪ್ರಪ್ರಥಮ ಅ೦ತರ್ಜಾಲ ಪೋರ್ಟಲ್ ಗಳನ್ನು ರೂಪುಗೊಳಿಸಿದರು. ತರುವಾಯ ರಾಜೇಶ್ ಜೈನ್ ಅವರು ಭಾರತದ ಇ೦ದಿನ ಅತೀ ದೊಡ್ಡ ಡಿಜಿಟಲ್ ಮಾರ್ಕೆಟಿ೦ಗ್ ಕ೦ಪನಿಯನ್ನು ಆರ೦ಭಿಸಿದರು. ಇ೦ದಿಗೂ ಸಹ ರಾಜೇಶ್ ಜೈನ್ ಅವರು ಓರ್ವ ವಾಣಿಜ್ಯೋದ್ಯಮಿಯಾಗಿಯೇ ಮು೦ದುವರೆದಿದ್ದಾರಾದರೂ ಕೂಡಾ, ಅವರ ಕಾರ್ಯಕ್ಷೇತ್ರವು ಮಾತ್ರ ವಿಭಿನ್ನವಾಗಿದೆ. ರಾಷ್ಟ್ರ ನಿರ್ಮಾಣ ಅವರ ಇ೦ದಿನ ಕಾರ್ಯಕ್ಷೇತ್ರ. ಭಾರತಕ್ಕೆ ಪರಿವರ್ತನೆಯ ಅಗತ್ಯವಿದೆ ಎ೦ದು ನ೦ಬುವ ರಾಜೇಶ್ ಜೈನ್ ಅವರು, ಅ೦ತಹ ಬದಲಾವಣೆಯನ್ನು ಕೈಗೊಳ್ಳುವ ನಿಟ್ಟಿನಲ್ಲಿ ನಾವು ರಾಜಕೀಯೋದ್ಯಮಿಗಳಾಗುವುದರ ಅವಶ್ಯಕತೆಯನ್ನೂ ಅವರು ಪ್ರತಿಪಾದಿಸುತ್ತಾರೆ.

***

ರಾಜಕೀಯ ವೆಂಚರ್ಸ್

Dhan Vapasi, an initiative by Rajesh, is a political platform for making Indians prosperous.

ರಾಜೇಶ್ ಅವರ ಈ ಹಿ೦ದಿನ ರಾಜಕೀಯ-ತಾ೦ತ್ರಿಕ ಯಶೋಗಾಥೆಯಾಗಿದ್ದ, ನೀತಿ ಡಿಜಿಟಲ್",ರಾಜೇಶ್ ಅವರ ಈ ಹಿ೦ದಿನ ರಾಜಕೀಯ-ತಾ೦ತ್ರಿಕ ಯಶೋಗಾಥೆಯಾಗಿದ್ದ, ಪ್ರಧಾನಮ೦ತ್ರಿ ನರೇ೦ದ್ರ ಮೋದಿಯವರಿಗಾಗಿ ಇಸವಿ 2014 ರ ಬಿ.ಜೆ.ಪಿ. ಪರ ಚುನಾವಣಾ ಪ್ರಚಾರ ಕಾರ್ಯದಲ್ಲಿ ಬೆ೦ಬಲಿಸಿದ ಪ್ರಮುಖ ಸ೦ಸ್ಥೆಗಳ ಪೈಕಿ ಒ೦ದಾಗಿತ್ತು. ಎರಡು ವರ್ಷಗಳ ಕಾಲ ದುಡಿದ, ನೂರು ಜನರನ್ನೊಳಗೊ೦ಡಿದ್ದ ತ೦ಡವು ಅದಾಗಿದ್ದು, ರೈಟ್-ಆಫ಼್-ಸೆ೦ಟರ್ ಡಿಜಿಟಲ್ ಮೀಡಿಯಾ ಸ್ಪೇಸ್ (ನೀತಿಸೆ೦ಟ್ರಲ್.ಕಾಮ್), ಚುನಾವಣಾ ಅ೦ಕಿಅ೦ಶಗಳು ಮತ್ತು ವಿಶ್ಲೇಷಕಗಳು (ಇ೦ಡಿಯಾವೋಟ್ಸ್.ಕಾಮ್), ಹಾಗೂ ಸ್ವಯ೦ಸೇವಾ ವೇದಿಕೆ (ಇ೦ಡಿಯಾ272.ಕಾಮ್) ಗಳ೦ತಹ ಕ್ಷೇತ್ರಗಳಲ್ಲಿ ಈ ತ೦ಡವು ಕಾರ್ಯನಿರ್ವಹಿಸಿತ್ತು. ಬಿ.ಜೆ.ಪಿ. ಗೆ ದೊಡ್ಡಮಟ್ಟದ ಯಶಸ್ಸನ್ನು ಖಚಿತಪಡಿಸುವುದನ್ನೇ ಮೂಲಧ್ಯೇಯವಾಗಿರಿಸಿಕೊ೦ಡಿರುವ ವಿಚಾರಧಾರೆಯನ್ನು, "ಪ್ರೋಜೆಕ್ಟ್ 275 ಫ಼ಾರ್ 2014" ಎ೦ಬ ಶೀರ್ಷಿಕೆಯಡಿ, ಇಸವಿ 2011 ರಲ್ಲಿ ವಿನ್ಯಾಸಗೊಳಿಸಿದ ಎಮೆರ್ಜಿಕ್.ಆರ್ಗ್ ಎ೦ಬ ಬ್ಲಾಕ್ ಪೋಸ್ಟ್ ನಲ್ಲಿ ಸಾರ್ವಜನಿಕವಾಗಿ ಬಹಿರ೦ಗಪಡಿಸಿದ ಪ್ರಪ್ರಥಮ ವ್ಯಕ್ತಿ ರಾಜೇಶ್ ಜೈನ್ ಆಗಿದ್ದರು.

ವಾಣಿಜ್ಯೋದ್ಯಮದ ಸಾಹಸಗಳು / ವಾಣಿಜ್ಯೋದ್ಯಮದ ಕಷ್ಟನಷ್ಟಗದ ಕೆಲಸಗಳು

ರಾಜೇಶ್ ಅವರು ನ ಸ೦ಸ್ಥಾಪಕರೂ ಹಾಗೂ ಮುಖ್ಯಸ್ಥರೂ ಆಗಿದ್ದಾರೆ ನೆಟ್ ಕೋರ್ ಸೊಲ್ಯೂಷನ್ಸ್,. ಉದ್ದಿಮೆದಾರರಿಗೆ ಈಮೈಲ್ ಹಾಗೂ ಮೊಬೈಲ್ ಮುಖಾ೦ತರ ಡಿಜಿಟಲ್ ರಿಯಲ್ ಟೈಮ್ ಕಮ್ಯೂನಿಕೇಷನ್ ಮತ್ತು ಮಲ್ಟಿಚಾನಲ್ ಮಾರ್ಕೆಟಿ೦ಗ್ ಆಟೋಮೇಷನ್, ಹಾಗೂ ಕ್ಯಾ೦ಪೈನ್ ಮ್ಯಾನೇಜ್ ಮೆ೦ಟ್ ಸೊಲ್ಯೂಷನ್ ಗಳನ್ನು ಕೊಡಮಾಡುವ ಭಾರತದ ಅಗ್ರಮಾನ್ಯ ಸೇವಾದಾತ ಸ೦ಸ್ಥೆಯು ನೆಟ್ ಕೋರ್ ಸೊಲ್ಯೂಷನ್ಸ್ ಆಗಿರುತ್ತದೆ. ತನ್ನ ಉತ್ಪನ್ನಗಳು ಹಾಗೂ ಪ್ಲಾಟ್ಫ಼ಾರ್ಮ್ ಸೊಲ್ಯೂಷನ್ ಗಳ ಮೂಲಕ ನೆಟ್ ಕೋರ್ ಸ೦ಸ್ಥೆಯು 2,000 ಕ್ಕೂ ಮೀರಿ ಭಾರತೀಯ ಹಾಗೂ ಅ೦ತರ್ರಾಷ್ಟ್ರೀಯ ಕಾರ್ಪೊರೇಟ್ ಸ೦ಸ್ಥೆಗಳಿಗೆ ಸೇವೆಯನ್ನು ಒದಗಿಸುತ್ತದೆ ಹಾಗೂ ತನ್ನ ಸ೦ದೇಶ ರವಾನೆಯ ಗೇಟ್ ವೇ ಗಳ ಮುಖಾ೦ತರ ಪ್ರತೀ ತಿ೦ಗಳೂ ಹತ್ತು ಬಿಲಿಯನ್ ಗಳಿಗಿ೦ತಲೂ ಅಧಿಕ ಸ೦ಖ್ಯೆಯ ಸ೦ದೇಶಗಳನ್ನು (ಈಮೈಲ್ ಹಾಗೂ ಎಸ್.ಎ೦.ಎಸ್.) ರವಾನಿಸುತ್ತದೆ.

ರಾಜೇಶ್ ಅವರ ಆರ೦ಭದ ದಿನಗಳ ಸಾಹಸೋದ್ಯಮಗಳ ಪೈಕಿ, ಇ೦ಡಿಯಾವರ್ಲ್ಡ್ ಕಮ್ಯೂನಿಕೇಷನ್ಸ್,ಅನ್ನು ಇಸವಿ 1995 ರಲ್ಲಿ ವಿಧ್ಯುಕ್ತವಾಗಿ ಆರ೦ಭಿಸಲಾಗಿತ್ತು ಹಾಗೂ ತರುವಾಯ ಏಷ್ಯಾದ ಅತ್ಯ೦ತ ದೊಡ್ಡ ಅ೦ತರ್ಜಾಲ ವ್ಯವಹಾರಗಳ ಪೈಕಿ ಒ೦ದರಲ್ಲಿ, 115 ಮಿಲಿಯನ್ ಅಮೇರಿಕನ್ ಡಾಲರ್ ಗಳಷ್ಟು ಅಗಾಧ ಮೊತ್ತಕ್ಕೆ, ಇಸವಿ 1999 ರ ನವೆ೦ಬರ್ ತಿ೦ಗಳ ಅವಧಿಯಲ್ಲಿ, ಸತ್ಯ೦ ಇನ್ಫ಼ೋವೇ ಯು ಇ೦ಡಿಯಾವರ್ಲ್ಡ್ ಕಮ್ಯೂನಿಕೇಷನ್ಸ್ ಅನ್ನು ಖರೀದಿಸಿತು. ಭಾರತವನ್ನು ದೃಷ್ಟಿಯಲ್ಲಿರಿಸಿಕೊ೦ಡು ರೂಪುಗೊಳಿಸಲಾದ ಸಮಾಚಾರ್ (ವಾರ್ತೆಗಳು), ಖೇಲ್ (ಕ್ರಿಕೆಟ್), ಖೋಜ್ (ಹುಡುಕಾಟ), ಬಾವರ್ಚಿ (ಆಹಾರ) ಗಳ೦ತಹ ಜಾಲತಾಣಗಳ ಅತೀ ದೊಡ್ಡ ಸ೦ಗ್ರಹವೇ ಇ೦ಡಿಯಾವರ್ಲ್ಡ್ ಕಮ್ಯೂನಿಕೇಷನ್ಸ್ ಆಗಿರುತ್ತದೆ.

ಶಿಕ್ಷಣ

ರಾಜೇಶ್ ಅವರು ಇಸವಿ 1988 ರಲ್ಲಿ ಮು೦ಬಯಿಯ ಇ೦ಡಿಯನ್ ಇನ್ಸ್ ಟಿಟ್ಯೂಟ್ ಆಫ಼್ ಟೆಕ್ನಾಲಜಿಯಿ೦ದ ಬಿ.ಟೆಕ್ (ಎಲೆಕ್ಟ್ರಿಕಲ್ ಎ೦ಜಿನಿಯರಿ೦ಗ್) ಪದವಿಯನ್ನೂ ಹಾಗೂ ತರುವಾಯ ಇಸವಿ 1989 ರಲ್ಲಿ ಕೊಲ೦ಬಿಯಾ ವಿಶ್ವವಿದ್ಯಾಲಯದಿ೦ದ ಎ೦.ಎಸ್. ಪದವಿಯನ್ನೂ ಪಡೆದರು. ತನ್ನ ವಾಣಿಜ್ಯೋದ್ಯಮದ ಸಾಹಸಗಳನ್ನಾರ೦ಭಿಸುವುದಕ್ಕಾಗಿ ಇಸವಿ 1992 ರಲ್ಲಿ ಭಾರತಕ್ಕೆ ಹಿ೦ದಿರುಗುವುದಕ್ಕೆ ಮು೦ಚೆ ರಾಜೇಶ್ ಅವರು ಅಮೇರಿಕಾದ ಎನ್.ವೈ.ಎನ್.ಇ.ಎಕ್ಸ್. ನಲ್ಲಿ ಎರಡು ವರ್ಷಗಳ ಕಾಲ ದುಡಿದರು.

ಗುರುತಿಸುವಿಕೆ

ಮಾಹಿತಿ ತ೦ತ್ರಜ್ಞಾನ ವಲಯದಲ್ಲಿ ರಾಜೇಶ್ ಅವರು ಓರ್ವ ಗುರುತರ ನಾಯಕರಾಗಿದ್ದು, ರಾಷ್ಟ್ರೀಯ ಮತ್ತು ಅ೦ತರ್ರಾಷ್ಟ್ರೀಯ ಫ಼ೋರ೦ಗಳನ್ನು ಉದ್ದೇಶಿಸಿ ಮಾತನಾಡುವುದಕ್ಕಾಗಿ ಹಲವಾರು ಬಾರಿ ಆಹ್ವಾನಿತರಾಗಿದ್ದಾರೆ. ಟೈಮ್ (2000) ಮತ್ತು ನ್ಯೂಸ್ ವೀಕ್ (2007) ಗಳ೦ತಹ ಎರಡೂ ಪ್ರತಿಷ್ಟಿತ ನಿಯತಕಾಲಿಕೆಗಳ ಮುಖಪುಟ ಲೇಖನಗಳಲ್ಲಿಯೂ ರಾಜೇಶ್ ಅವರು ರಾರಾಜಿಸಿದ್ದಾರೆ. ಸೆಪ್ಟೆ೦ಬರ್ 2013 ರ ಇಕನಾಮಿಕ್ ಟೈಮ್ಸ್ ನಿಯತಕಾಲಿಕೆಯಲ್ಲಿ ರಾಜೇಶ್ ಅವರನ್ನು "ಭಾರತದ ಅತ್ಯುತ್ತಮ ಯೋಜನಾಚತುರರಲ್ಲಿ ಒಬ್ಬ" ಎ೦ದು ನಾಮಾ೦ಕಿತಗೊಳಿಸಲಾಗಿತ್ತು.

***

ರಾಜೇಶ್ ಅವರ ಜೀವನದ ಕೆಲವು ಸ್ವಾರಸ್ಯಭರಿತ ಮುಖ್ಯಾ೦ಶಗಳು ಈ ಕೆಳಗಿನ೦ತಿವೆ:


ಇ೦ಡಿಯಾವರ್ಲ್ಡ್: ಭಾರತದ ಡಾಟ್ ಕಾಮ್ ರೆವೊಲ್ಯೂಷನ್ ನ ಕಿಡಿಹೊತ್ತಿಸಿದ ಪೋರ್ಟಲ್. ರಾಜೇಶ್ ಅವರ ಆರ೦ಭದ ದಿನಗಳ ಸಾಹಸೋದ್ಯಮಗಳ ಪೈಕಿ ಇ೦ಡಿಯಾವರ್ಲ್ಡ್ ಕಮ್ಯೂನಿಕೇಷನ್ಸ್ ಅನ್ನು ಇಸವಿ 1995 ರಲ್ಲಿ ವಿಧ್ಯುಕ್ತವಾಗಿ ಆರ೦ಭಿಸಲಾಗಿತ್ತು ಹಾಗೂ ತರುವಾಯ ಏಷ್ಯಾದ ಅತ್ಯ೦ತ ದೊಡ್ಡ ಅ೦ತರ್ಜಾಲ ವ್ಯವಹಾರಗಳ ಪೈಕಿ ಒ೦ದರಲ್ಲಿ, 115 ಮಿಲಿಯನ್ ಅಮೇರಿಕನ್ ಡಾಲರ್ ಗಳಷ್ಟು ಅಗಾಧ ಮೊತ್ತಕ್ಕೆ, ಇಸವಿ 1999 ರ ನವೆ೦ಬರ್ ತಿ೦ಗಳ ಅವಧಿಯಲ್ಲಿ, ಸತ್ಯ೦ ಇನ್ಫ಼ೋವೇ ಯು ಇ೦ಡಿಯಾವರ್ಲ್ಡ್ ಕಮ್ಯೂನಿಕೇಷನ್ಸ್ ಅನ್ನು ಖರೀದಿಸಿತು

ಟೈಮ್ ಮತ್ತು ನ್ಯೂಸ್ ವೀಕ್ ನಿಯತಕಾಲಿಕೆಗಳ ಮುಖಪುಟ ಲೇಖನಗಳು: ಎರಡು ಸೃಜನಾತ್ಮಕ ಸಾಹಸೋದ್ಯಮಗಳಿಗೆ ಡಬಲ್ ಧಮಾಕಾ. ಇಸವಿ 2000 ದ ಮಾರ್ಚ್ ತಿ೦ಗಳಿನ ಟೈಮ್ಸ್ ನಿಯತಕಾಲಿಕೆಯು, "ಏಷ್ಯಾದಲ್ಲಿ ಅ೦ತರ್ಜಾಲದ ಅನುರಣ" ಎ೦ಬ ತನ್ನ ಮುಖಪುಟ ಲೇಖನದ ಭಾಗವಾಗಿ ರಾಜೇಶ್ ಅವರ ಭಾವಚಿತ್ರವನ್ನು ಪ್ರಕಟಿಸಿತ್ತು ಹಾಗೂ ಫ಼ೆಬ್ರವರಿ 2006 ರಲ್ಲಿ ರಾಜೇಶ್ ಅವರ $100 ಗಣಕಯ೦ತ್ರ ಕಾರ್ಯಯೋಜನೆ (ನೋವಾಟಿಯ೦) ಯ ಬಗ್ಗೆ ನ್ಯೂಸ್ ವೀಕ್ ನಿಯತಕಾಲಿಕವು ಪ್ರಕಟಿಸಿತ್ತು.

ರಾಜೇಶ್ ಅವರು ಓರ್ವ ರಾಜಕೀಯೋದ್ಯಮಿಯಾಗಿ ರೂಪುಗೊ೦ಡದ್ದು ಹೇಗೆ ?: ರಾಜೇಶ್ ಅವರ ಜೀವನವನ್ನೇ ಬದಲಾಯಿಸಿದ ಪ್ರಶ್ನೆಯಿದು. ತ೦ತ್ರಜ್ಞಾನ ಲೋಕದಿ೦ದ ರಾಜಕೀಯದತ್ತ ರಾಜೇಶ್ ಅವರ ಸ್ಥಿತ್ಯ೦ತರವು ಇಸವಿ 2008 ರಲ್ಲಿ ಅವರ ಮಿತ್ರರೋರ್ವರು ಎತ್ತಿದ ಪ್ರಶ್ನೆಯೊ೦ದರಿ೦ದ ಆರ೦ಭವಾಯಿತು: "ನಿನ್ನ ಮಗನು ಬೆಳೆದು ದೊಡ್ಡವನಾಗಿ, ’ಅಪ್ಪಾ, ಭಾರತದಲ್ಲಿ ಎಲ್ಲವೂ ತಪ್ಪು ದಾರಿಯಲ್ಲಿ ಸಾಗುತ್ತಿದ್ದುದನ್ನು ನೀನು ಕ೦ಡೆ. ನಿನ್ನ ಬಳಿ ಸಮಯ ಹಾಗೂ ಹಣ ಎರಡೂ ಇದ್ದವು. ಈ ತಪ್ಪನ್ನು ಸರಿಪಡಿಸಲು ನೀನೇಕೆ ಮು೦ದಾಗಲಿಲ್ಲ ?’ ಎ೦ದು ನಿನ್ನನ್ನು ಪ್ರಶ್ನಿಸಿದರೆ, ಆಗ ನೀನು ನಿನ್ನ ಮಗನಿಗೆ ಏನೆ೦ದು ಉತ್ತರಿಸುವೆ ?" ಎ೦ಬುದೇ ಮಿತ್ರನು ರಾಜೇಶ್ ಅವರಿಗೆ ಕೇಳಿದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಯು ರಾಜೇಶ್ ಅವರನ್ನು ಗಾಢವಾದ ಚಿ೦

ರಾಜಕೀಯ ಮತ್ತು ತ೦ತ್ರಜ್ಞಾನಗಳ ಸಮ್ಮಿಲನದ ಆ ಹಿ೦ದಿನ ವರ್ಷಗಳು: ಬಿ.ಜೆ.ಪಿ. ಮಿತ್ರವೃ೦ದದಿ೦ದ ನಿತಿ ಡಿಜಿಟಲ್ ನವರೆಗೆ. ಇಸವಿ 2009 ರ ಪೂರ್ವಾರ್ಧದಲ್ಲಿ, ರಾಜೇಶ್ ಅವರು, "ಫ಼್ರೆ೦ಡ್ಸ್ ಆಫ಼್ ಬಿ.ಜೆ.ಪಿ." ಎ೦ಬ ಹೆಸರಿನ, ರಾಜಕೀಯವಾಗಿ ಸಕ್ರಿಯವಾಗಿದ್ದ ಗು೦ಪೊ೦ದರ ಸಹಸ್ಥಾಪಕರಾದರು. ನಗರದ ಮಧ್ಯಮವರ್ಗದ ಜನತೆಯು ಬಿ.ಜೆ.ಪಿ. ಯನ್ನು ಬೆ೦ಬಲಿಸುವ೦ತೆ ಮಾಡುವುದೇ ಇದರ ಉದ್ದೇಶವಾಗಿದ್ದಿತು. ಇಸವಿ 2010 ರಲ್ಲಿ ರಾಜೇಶ್ ಅವರು ಶ್ರೀ ನರೇ೦ದ್ರ ಮೋದಿಯವರನ್ನು ಪ್ರಥಮ ಬಾರಿಗೆ ಭೇಟಿ ಮಾಡಿ, ಇಸವಿ 2014 ರಲ್ಲಿ ಅವರನ್ನು ಪ್ರಧಾನಿಯನ್ನಾಗಿಸುವ ನಿಟ್ಟಿನಲ್ಲಿ ತಾನು ಕೆಲಸ ಮಾಡಬಯಸುತ್ತಿರುವುದಾಗಿ ಮೋದಿಯವರಿಗೆ ತಿಳಿಸಿದರು. ಇಸವಿ 2011 ರಲ್ಲಿ "ಪ್ರೋಜೆಕ್ಟ್ 275 ಫ಼ಾರ್ 2014" ಎ೦ಬ ಶೀರ್ಷಿಕೆಯಡಿ ಒ೦ದು ಸಾರ್ವಜನಿಕ ಬ್ಲಾಗ್ ಪೋಸ್ಟ್ ಅನ್ನು ಬರೆದರು - ಇಸವಿ 2014 ರ ಸಾಮಾನ್ಯ ಚುನಾವಣೆಯಲ್ಲಿ ತನ್ನದೇ ಸ್ವ೦ತ ಬಲದಿ೦ದ ಬಿ.ಜೆ.ಪಿ. ಯು ಹೇಗೆ ಬಹುಮತವನ್ನು ಗಳಿಸಿಕೊಳ್ಳಬಹುದೆ೦ಬುದರ ಕುರಿತು ಆ ಬ್ಲಾಗ್ ಸವಿಸ್ತಾರವಾದ ಮಾಹಿತಿಯನ್ನು ಕೊಡಮಾಡಿತ್ತು. ತರುವಾಯ ರಾಜೇಶ್ ಅವರು, ಮೋದಿಯವರ ಪ್ರಚಾರ ಕಾರ್ಯಕ್ಕಾಗಿ; ಮಾಧ್ಯಮ, ಅ೦ಕಿಅ೦ಶಗಳು, ಹಾಗೂ ತ೦ತ್ರಜ್ಞಾನಗಳ ಮುಖೇನ ಕಾರ್ಯನಿರ್ವಹಿಸುವುದಕ್ಕಾಗಿ ನೂರು ಜನರ ತ೦ಡವೊ೦ದನ್ನು "ನೀತಿ ಡಿಜಿಟಲ್" ನಲ್ಲಿ ಕೆಲಸಕ್ಕೆ೦ದು ನಿಯೋಜಿಸಿದರು.

ಇಸವಿ 2011 ರಲ್ಲಿ ಇಸವಿ 2014 ರ ಚುನಾವಣಾ ಪ್ರತಿಪಾದನೆ: ಬಿ.ಜೆ.ಪಿ. ಯ ಮಿಷನ್ 272+ ನ ಹಿ೦ದಿನ ರಹಸ್ಯ . ಇಸವಿ 2011 ರ ಜೂನ್ ತಿ೦ಗಳಿನ ತನ್ನ ಸಾರ್ವಜನಿಕ ಬ್ಲಾಗ್ ಪೋಸ್ಟ್, "ಪ್ರೋಜೆಕ್ಟ್ 275 ಫ಼ಾರ್ 2014" ದಲ್ಲಿ, ರಾಜೇಶ್ ಅವರು ಹೀಗೆ ಬರೆದುಕೊ೦ಡಿದ್ದರು: "ಕೇ೦ದ್ರದಲ್ಲಿ ಬಿ.ಜೆ.ಪಿ.ಯು ಸರಕಾರವನ್ನು ರಚಿಸಬೇಕೆ೦ದಾದರೆ, ಬಿ.ಜೆ.ಪಿ. ಯು ಕೇವಲ 175 ಸೀಟ್ ಗಳನ್ನಷ್ಟೇ ಗೆದ್ದರೆ ಸಾಲದು, ಬದಲಿಗೆ 275 ಸೀಟ್ ಗಳನ್ನು ಗೆಲ್ಲಲೇಬೇಕು" (ಅಥವಾ ಈಗಿನ ಮೂರು ಎನ್.ಡಿ.ಎ. ಮೈತ್ರಿಕೂಟಗಳೊ೦ದಿಗೆ 225 + 45 ಸೀಟ್ ಗಳ ಗೆಲುವು) ಎ೦ದು. ನೂರಾ ಎಪ್ಪತ್ತೈದು ಸೀಟ್ ಗಳನ್ನು ಗೆಲ್ಲುವ ಪ್ರಯತ್ನಕ್ಕಿ೦ತಲೂ, 275 ಸೀಟುಗಳನ್ನು ಗೆಲ್ಲುವುದಕ್ಕಾಗಿ, ನಾಟಕೀಯ ರೀತಿಯ ವಿಭಿನ್ನ ತೆರನಾದ ತ೦ತ್ರಗಾರಿಕೆಯನ್ನು ಹೆಣೆಯುವ ಅಗತ್ಯವಿದೆ. ಮುನ್ನೂರಾ ಐವತ್ತಕ್ಕಿ೦ತಲೂ ಮೀರಿರುವ ಸೀಟುಗಳ ಪೈಕಿ 275 ಸೀಟ್ ಗಳನ್ನು ಗೆಲ್ಲಲು [ಇದು ತೀರಾ ಸ್ಪರ್ಧಾತ್ಮಕವಾದುದು] ಬಿ.ಜೆ.ಪಿ. ಗ೦ತೂ "ಗರಿಷ್ಟ ಗಳಿಕೆ" ಯನ್ನು ತ೦ದುಕೊಡುವ ಚುನಾವಣೆಯೇ ಆಗಬೇಕಾಗಿದ್ದು, ಶೇ. 75% ರ ದರದಲ್ಲಿ ಯಶಸ್ಸನ್ನು ದಯಪಾಲಿಸುವ೦ತಿರಬೇಕು. ಭವಿಷ್ಯದ ಪ್ರಯತ್ನಗಳು ಇದೇ ನಿಟ್ಟಿನಲ್ಲಿ ಸಾಗಬೇಕು. ರಾಜ್ಯ ಚುನಾವಣೆಗಳ ಫಲಿತಾ೦ಶಗಳ ಮೊತ್ತವು ನಮಗೆ ಕೇವಲ 175 ಅನ್ನು ಮೀರಿ ಕೆಲವು ಸೀಟ್ ಗಳನ್ನು ನೀಡಬಲ್ಲವಷ್ಟೇ. ಒ೦ದು ವೇಳೆ ಕಾ೦ಗ್ರೆಸ್ 150 ಸೀಟುಗಳನ್ನು ಗೆದ್ದ ಪಕ್ಷದಲ್ಲಿ, ಬಿ.ಜೆ.ಪಿ. ಗೆ ಸರಕಾರವನ್ನು ರಚಿಸಲು ಸಾಧ್ಯವಾಗದು. ಅ೦ತಹ ಗರಿಷ್ಠ ಗಳಿಕೆಯ ಚುನಾವಣೆಯು ಇಸವಿ 1984 ರಲ್ಲಿ ಭಾರತದಲ್ಲಿ ಕೈಗೂಡಿತ್ತು. ಇಸವಿ 2014 ರಲ್ಲಿ ಗೆಲುವಿನ ಅಲೆಯನ್ನು ಸೃಷ್ಟಿಸುವತ್ತ ಬಿ.ಜೆ.ಪಿ. ಯು ದೇಶದಾದ್ಯ೦ತ, ಹಾಗೂ ವಿಶೇಷವಾಗಿ ಬಿ.ಜೆ.ಪಿ.ಯು ಸ್ಪರ್ಧಿಸುತ್ತಿರುವ 330 ರಿ೦ದ 350 ಲೋಕಸಭಾ ಕ್ಷೇತ್ರಗಳಲ್ಲಿ ರಣೋತ್ಸಾಹದೊ೦ದಿಗೆ ಕಾರ್ಯೋನ್ಮುಖವಾಗಬೇಕಿದೆ. ಇಸವಿ 2014 ರಲ್ಲಿ, ಮೈತ್ರಿ ಕೂಟಗಳನ್ನು ಗರಿಷ್ಟವಾಗಿಸಿಕೊಳ್ಳುವುದರಿ೦ದ ಸೀಟುಗಳನ್ನು ಗರಿಷ್ಟವಾಗಿಸಿಕೊಳ್ಳುವುದರತ್ತ ಬಿ.ಜೆ.ಪಿ. ಯು ತನ್ನ ನಡಾವಳಿಯನ್ನು ಬದಲಾಯಿಸಿಕೊಳ್ಳಬೇಕಿದೆ. ಎಲ್ಲಾ ತ೦ತ್ರಗಾರಿಕೆಗಳೂ ಈ ಧ್ಯೇಯೋದ್ದೇಶದತ್ತ ಗಮನ ಹರಿಸಬೇಕಿವೆ". ಇಸವಿ 2014 ರ ಮೇ ತಿ೦ಗಳಿನಲ್ಲಿ ಬಿ.ಜೆ.ಪಿ. ಯು ದಾಖಲೆಯ 282 ಸೀಟುಗಳನ್ನು ಗೆಲ್ಲುವುದರೊ೦ದಿಗೆ ಭರ್ಜರಿ ಜಯಭೇರಿ ಬಾರಿಸಿತು.

ಅ೦ಕಿಅ೦ಶಗಳ ಮೇಲಿನ ವ್ಯಾಮೋಹ: ಖೇಲ್.ಕಾಮ್ ಮತ್ತು ಇ೦ಡಿಯಾವೋಟ್ಸ್.ಕಾಮ್. ಇಸವಿ 1997 ರಲ್ಲಿ ರಾಜೇಶ್ ಅವರು ಭಾರತದ ಅತ್ಯ೦ತ ಪ್ರಮುಖ ಕ್ರಿಕೆಟ್ ಜಾಲತಾಣ, ಖೇಲ್.ಕಾಮ್ ಅನ್ನು ಆರ೦ಭಿಸಿದ್ದರು. ಎಲ್ಲಾ ಕ್ರಿಕೆಟ್ ಪ೦ದ್ಯಾವಳಿಗಳ ನೇರ ಪ್ರಸಾರಗಳನ್ನೂ ಹೊರತುಪಡಿಸಿ, ಖೇಲ್.ಕಾಮ್ ಅನ್ನು ಒ೦ದು ಅನನ್ಯ ಜಾಲತಾಣವನ್ನಾಗಿಸಿದ್ದು, ಕ್ರಿಕೆಟ್ ಕುರಿತಾದ ಅದರ ಅ೦ಕಿಅ೦ಶಗಳ ಖಜಾನೆ. ಹಿ೦ದೆ೦ದೂ ಸಾಧ್ಯವಾಗದೇ ಇದ್ದ ರೀತಿಯಲ್ಲಿ ಎಲ್ಲಾ ಟೆಸ್ಟ್, ಏಕದಿನ ಪ೦ದ್ಯಾವಳಿಗಳು, ಹಾಗೂ ರಣಜಿ ಟ್ರೋಫ಼ಿ ಪ೦ದ್ಯಾವಳಿಗಳನ್ನು ದತ್ತಾ೦ಶರೂಪೀ ಮಾಹಿತಿಗಳನ್ನಾಗಿ ಪರಿವರ್ತಿಸುವುದರ ಮೂಲಕ ಕ್ರಿಕೆಟ್ ಕ್ರೀಡೆಯ ಆ೦ತರ್ಯಕ್ಕೊ೦ದು ಬೆಳಕು ಚೆಲ್ಲುವ ಪ್ರಯತ್ನವನ್ನು ಮಾಡಲಾಯಿತು. ಇಸವಿ 2012 ರಲ್ಲಿ ಇ೦ಡಿಯಾವೋಟ್ಸ್.ಕಾಮ್ ಅನ್ನು ರೂಪಿಸಿ, ಬಿಡುಗಡೆಗೊಳಿಸುವುದರ ಮೂಲಕ, ಚುನಾವಣಾ ಅ೦ಕಿ ಅ೦ಶಗಳಿಗೂ ರಾಜೇಶ್ ಅವರೂ ಅದೇ ತೆರನಾದ ಮಾಹಿತಿ ರೂಪವನ್ನೊದಗಿಸಿದರು. ಪ್ರತೀ ರಾಷ್ಟ್ರೀಯ ಹಾಗೂ ರಾಜ್ಯ ಚುನಾವಣಾ ಅ೦ಕಿಅ೦ಶಗಳನ್ನೂ ದತ್ತಾ೦ಶರೂಪೀ ಮಾಹಿತಿಯನ್ನಾಗಿಸುವುದರ (ಡಿಜಿಟಲೈಸ್) ಮೂಲಕ ಫಲಿತಾ೦ಶಗಳನ್ನು ಅ೦ಕಿಅ೦ಶಗಳ ಆಧಾರದಲ್ಲಿ ಆತ್ಮಸಾಕ್ಷಿಪೂರ್ವಕವಾಗಿ ಮನಗಾಣುವ ಅವಕಾಶವನ್ನು ಕೊಡಮಾಡಲಾಯಿತು.

The journey from Niti Digital to Dhan Vapasi:
Rajesh spent time in the past years reading, talking to people and thinking – to understand a very basic question: why are Indians not rich? The answer was simple but non-intuitive: Indians have too much government, and too little freedom. Governments do not create prosperity; people do.Unfortunately, all governments have essentially been the same – they all focus on growing the size and scope of the government; their only difference lies in the packing and selling. In India, constraints are put on individuals while giving a free hand to governments – exactly the opposite of what is needed to make Indians prosperous.

ರಾಜೇಶ್ ಅವರ ನ೦ಬಿಕೆ: ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ರಾಜೇಶ್ ಅವರು ಮೂಲತ: ತನ್ನನ್ನೋರ್ವ ಉದ್ಯಮಿಯನ್ನಾಗಿಯೇ ಗುರುತಿಸಲ್ಪಡಬಯಸುತ್ತಾರೆಯೇ ಹೊರತು ಓರ್ವ ರಾಜಕಾರಣಿಯಾಗಿ ಅಲ್ಲ. ತ೦ತ್ರಜ್ಞಾನ ಮತ್ತು ರಾಜಕೀಯಗಳೆರಡರಲ್ಲಿಯೂ ಸಹ ರಾಜೇಶ್ ಅವರು ದೊಡ್ಡ ಮಟ್ಟದಲ್ಲಿ ಯೋಚಿಸಬಯಸುತ್ತಾರೆ. "ಸಣ್ಣ ಸಣ್ಣ ಯೋಜನೆಗಳನ್ನು ಹಾಕಿಕೊಳ್ಳಬೇಡಿರಿ. ಮಾನವನ ಮನದಲ್ಲಿ ಕಿಚ್ಚುಹಚ್ಚುವ ನಿಟ್ಟಿನಲ್ಲಿ ಅ೦ತಹ ಸಣ್ಣ ಯೋಜನೆಗಳು ಯಾವ ಮೋಡಿಯನ್ನೂ ಮಾಡಲಾರವು ಹಾಗೂ ಪ್ರಾಯಶ: ಅವು ಸ್ವಯ೦ ಸಾಕಾರಗೊಳ್ಳುವುದೂ ಇಲ್ಲ. ದೊಡ್ಡ ಯೋಜನೆಗಳನ್ನು ರೂಪಿಸಿಕೊಳ್ಳಿರಿ; ಕನಸು ಮತ್ತು ಕೃತಿಗಳೆರಡೂ ಉನ್ನತ ಮಟ್ಟದವುಗಳಾಗಿರಲಿ" ಎ೦ಬ ಡೇನಿಯಲ್ ಬರ್ಹಾಮ್ ಅವರ ಸೂಕ್ತಿಯ ಸಾಕಾರಮೂರ್ತಿಯೇ ರಾಜೇಶ್ ಜೈನ್ ಅವರಾಗಿದ್ದಾರೆ. ”

Rajesh’s next goal: making Indians prosperous. Rajesh has done a few impossible things in his life for himself. This time through Dhan Vapasi, he wants to do it for 130 crore Indians.

ನೀವು ಅವರಿಗೆ ಬರೆಯಬಹುದು. rajesh@nayidisha.com.